ಇಲ್ಲಿವೆ ನೋಡಿ ಹಿರಿಯ ನಾಗರೀಕರಿ ಗಾಗಿ ಉತ್ತಮವಾದಂತ ಹೂಡಿಕೆ  ಐಡಿಯಾಗಳು.!

ಭಾರತದಲ್ಲಿ ಮತ್ತು ಜಾಗತಿಕ ಮಟ್ಟದಲ್ಲಿ ಒಂದೇ ಸಮನೆ ಹಣದುಬ್ಬರ ಏರಿಕೆಯನ ಕಾಣುತ್ತಿದೆ. ಜನರ ಬದುಕು ಅದರಲ್ಲೂ ಹಿರಿಯ ನಾಗರಿಕರು ಮತ್ತು ನಿಶ್ಚಿತ ಠೇವಣಿಯ ಮೇಲಿನ ಆದಾಯವನ್ನ ನಂಬಿ ಬದುಕುವ ಕೋಟ್ಯಂತರ ಜನರ ಬದುಕು ಮತ್ತೆ ಅನಿಶ್ಚಿತತೆಯತ್ತ ಸಾಗುತ್ತಿದೆ. ಈ ವರ್ಷ ಬಡ್ಡಿ ದರಗಳು ಹೆಚ್ಚಾಗುವ ಸಾಧ್ಯತೆಗಳು ಹೆಚ್ಚಾಗಿದ್ದವು. ಆದರೆ ವರ್ಷದ ಪ್ರಾರಂಭದಲ್ಲೇ ಆರ್‌ಬಿಐ ಹೇಳಿಕೆ ಸದ್ಯದ ಮಟ್ಟಿಗೆ ಅಂದರೆ ಕನಿಷ್ಠ ಇನ್ನೊಂದು ಆರು ತಿಂಗಳು ಬಡ್ಡಿ ದರಗಳು ಏರಿಕೆಯಾಗುವುದಿಲ್ಲ ಎನ್ನುವುದನ್ನ ಸಾರುತ್ತಿದೆ. ಈ ಸಮಯದಲ್ಲಿ ಸುರಕ್ಷತೆ ದೃಷ್ಟಿಯಿಂದ ಮತ್ತು ಇದ್ದುದರಲ್ಲೇ ಪರವಾಗಿಲ್ಲ ಎನ್ನುವ ಮಟ್ಟದ ಬಡ್ಡಿ ನೀಡುವ ಹೂಡಿಕೆಗಳ ಬಗ್ಗೆ ಒಂದಷ್ಟು ಮಾಹಿತಿ ನೀಡುವ ಪ್ರಯತ್ನ ಇಲ್ಲಿದೆ.

ಪ್ರಧಾನಮಂತ್ರಿ ವಯ ವಂದನಾ ಯೋಜನೆ: ಲೈಫ್ ಇನ್ಸೂರೆನ್ಸ್ಕಾ ರ್ಪೋರೇಶನ್‌ ಸಂಸ್ಥೆ ಕೇಂದ್ರ ಸರಕಾರದ ಸಹಕಾರದೊಂದಿಗೆ ಈ LOID ಯೋಜನೆಯನ್ನು ಪ್ರಾರಂಭಿಸಿದೆ. ಮೊದಲಿಗೆ ಇದರಲ್ಲಿನ ಹೂಡಿಕೆಯ ಮೇಲೆ ನಿಗದಿತ ಬಡ್ಡಿಯನ್ನ ನೀಡಲಾಗುತ್ತಿತ್ತು, ಇದೀಗ ಪ್ರತಿ ವರ್ಷ ಏಪ್ರಿಲ್ ಒಂದರಂದು ಹೊಸ ಬಡ್ಡಿ ದರವನ್ನ ಘೋಷಿಸಲಾಗುತ್ತದೆ. ಮೂರಿನ ಒಂದು ವರ್ಷ ಈ ಬಡ್ಡಿ ಚಾಲ್ತಿಯಲ್ಲಿರುತ್ತದೆ. ಸದ್ಯದ ಮಟ್ಟಿಗೆ ಇದು 14 ಪ್ರತಿಶತ ಬಡ್ಡಿಯನ್ನ ನೀಡುತ್ತದೆ. ಈ ಬಡ್ಡಿ ಹಣವನ್ನ ಹಳೆ ಕೊಮ್ಮೆ ನೀಡಲಾಗುತ್ತದೆ, ಹೀಗಾಗಿ ಇದರಿಂದ ಬರುವ ಬಡ್ಡಿ ಪ್ರತಿಶತ 7.66 ಪ್ರತಿಶತಕ್ಕೆ ಸಮವಾಗುತ್ತದೆ. ಇದರಲ್ಲಿ ಕನಿಷ್ಠ ಹೂಡಿಕೆ ಒಂದೂವರೆ ಲಕ್ಷವಾಗಿದ್ದು, ಗರಿಷ್ಠ ಹಣ 15 ಲಕ್ಷಕ್ಕೆ ಸೀಮಿತಗೊಳಿಸಲಾಗಿದೆ. ಇಲ್ಲಿನ ಹೂಡಿಕೆಯನ್ನ ಹತ್ತು ವರ್ಷಗಳ ಕಾಲ ಮುಟ್ಟುವ ಹಾಗಿಲ್ಲ. ಮೂರು
ವರ್ಷದ ನಂತರ ಹೂಡಿಕೆಯ ಮೇಲೆ 75 ಪ್ರತಿಶತ ಸಾಲವನ್ನ ಪಡೆಯುವ ಅವಕಾಶ ಕೂಡ ಇದೆ. ಸದ್ಯದ ಮಟ್ಟಿಗೆ ಹಣದ ಅವಶ್ಯಕತೆ ಇಲ್ಲದೆ, ನಿಖರ ಮೊತ್ತವನ್ನ ಬಯಸುವ ಹಿರಿಯ ನಾಗರಿಕರಿಗೆ ಇದು ಪೆನ್ನನ್ ರೀತಿಯಲ್ಲಿ
ಕೆಲಸ ಮಾಡುತ್ತದೆ.


ಪೋಸ್ಟ್ ಆಫೀಸ್ ಮಂತ್ರಿ ಇನ್‌ಕಮ್ ಮ್: ಗಮನಿಸಿ ಇದರಲ್ಲಿ ಕೂಡ ಐದು ವರ್ಷಗಳ ಲಾಕ್‌ಇನ್ ಪಿರಿಯಡ್ ಇರುತ್ತದೆ. ಅಂದರೆ ಐದು ವರ್ಷಗಳ ಕಾಲ ಈ ಹಣವನ್ನ ವಾಪಸ್ಸು ಪಡೆಯುವಂತಿಲ್ಲ, ಸಂಕಷ್ಟದ ಸಮಯದಲ್ಲಿ ಒಂದು ವರ್ಷದ ನಂತರ ತೆಗೆಯುವ ಅವಕಾಶವಿದೆ ಆದರೆ ಅದಕ್ಕೆ ಪೆನಾಲ್ಟಿ ಇರುತ್ತದೆ. ಕನಿಷ್ಠ ಸಾವಿರ ರೂಪಾಯಿ ಮತ್ತು ಗರಿಷ್ಠ ನಾಲ್ಕೂವರೆ ಲಕ್ಷ ಇಲ್ಲಿ ಹೂಡಿಕೆ ಮಾಡಬಹುದು. ಜಾಯಿಂಟ್ ಅಕೌಂಟ್ಇ ದ್ದಾಗ ಈ ಹಣವನ್ನ 9 ಲಕ್ಷದ ವರೆಗೆ ಏರಿಕೆ ಮಾಡಲಾಗುತ್ತದೆ. ಸದ್ಯದ ಹೂಡಿಕೆ 6.6 ಪ್ರತಿಶತ ಬಡ್ಡಿಯನ್ನ ನೀಡುತ್ತದೆ. ಇದರ ಜೊತೆಗೆ ಪೋಸ್ಟ್ ಆಫೀಸ್‌ನಲ್ಲಿ ವೇಳೆ ಆಧಾರಿತ ಇತರ ಠೇವಣಿ ಸ್ಟೀಮ್‌ಗಳು ಕೂಡ ಲಭ್ಯವಿದೆ. ಇವುಗಳು ಸುರಕ್ಷತೆ ದೃಷ್ಟಿಯಿಂದ ಉತ್ತಮ, ಹಾಗೂ ಮಾರುಕಟ್ಟೆಯಲ್ಲಿನ ಇಂದಿನ ಸ್ಥಿತಿ ಪ್ರಕಾರ ಸಿಗುವ ಬಡ್ಡಿ ದರವೂ ಕಡಿಮೆಯೇನಲ್ಲ.


ಹಿರಿಯ ನಾಗರಿಕ ನಿಶ್ಚಿತ ಸಮಯ ಠೇವಣಿ: ಸ್ಟೇಟ್ ಬ್ಯಾಂಕ್ಆ ಫ್ ಇಂಡಿಯಾದಲ್ಲಿ ಐದು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ಸಮಯಕ್ಕೆ ಇಡುವ ಹಣದ ಮೇಲೆ : 6.2 ಪ್ರತಿಶತ ಬಡ್ಡಿಯನ್ನ ನೀಡಲಾಗುತ್ತಿದೆ. ಇಲ್ಲಿ ಬಡ್ಡಿಯನ್ನ ತಿಂಗಳಿಗೆ, ಮೂರು ತಿಂಗಳಿಗೆ ಅಥವಾ ಆರು ತಿಂಗಳಿಗೆ ಹೀಗೆ ನಮಗೆ ಬೇಕಾದ ಅವಧಿಯಲ್ಲಿ ಪಡೆಯುವ
ಅನುಕೂಲವಿದೆ.


ಟ್ಯಾಕ್ಸ್ ಫ್ರೀ ಬಾಂಡ್ಸ್: ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ, ಎನ್ಸಿಪಿಸಿ, ಇಂಡಿಯನ್ ರೈಲ್ವೇಸ್, ಹೌಸಿಂಗ್ ಡೆವಲಪ್ಟೆಂಟ್ಕಾ ರ್ಪೋರೇಶನ್ ಆಫ್ ಇಂಡಿಯಾ ಹೀಗೆ ಅನೇಕೆ ಸಂಸ್ಥೆಗಳು ಹೊರಡಿಸುವ ಬಾಂಡ್‌ಗಳು 5.5 ರಿಂದ 6.5 ಪ್ರತಿಶತ ಬಡ್ಡಿಯನ್ನ ನೀಡುತ್ತವೆ. ಇಲ್ಲಿ ಬಡ್ಡಿಯನ್ನ ವರ್ಷಕ್ಕೊಮ್ಮೆ ನೀಡಲಾಗುತ್ತದೆ. ಹೂಡಿಕೆಯ

Leave a Reply

Your email address will not be published. Required fields are marked *